Thu. Dec 9th, 2021

ಭಾರತ - ಬಾಂಗ್ಲಾದೇಶ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದ ಎಲ್ಲರ ಸ್ಟಾರ್ ಆದ "ಅಜ್ಜಿ"

ಎಜ್ ಬಾಸ್ಟನ್:  ಮಂಗಳವಾರ ನಡೆದ ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ  ಎಲ್ಲರ ನೋಟಕ್ಕೆ ಒಬ್ಬರು ಅಜ್ಜಿ ಗುರಿಯಾಗಿದ್ದಾರೆ.  ಕೆನ್ನೆಯಲ್ಲಿ ತ್ರಿವರ್ಣ ಧ್ವಜದ ಬಣ್ಣ ಹಚ್ಚಿ,  ಕೈಯಲ್ಲಿ ಭಾರತದ ಬಾವುಟ ಹಿಡಿದು,  ಪೀಪಿ  ಊದುತ್ತಿರುವ ಈ ಅಜ್ಜಿಯ ವಿಡಿಯೋ ಹಾಗೂ ಫೋಟೋಗಳು ಈಗ ಸಾಮಾಜಿಕ ತಾಣದಲ್ಲಿ  ಭಾರಿ ವೈರಲ್ ಆಗ್ತಾ ಇದೆ.

87 ವರ್ಷದ ಈ ಉತ್ಸಾಹಿ ಅಜ್ಜಿಯ ಹೆಸರು ಚಾರುಲತಾ ಪಟೇಲ್.  ಮಂಗಳವಾರ ನಡೆದ ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯ ವೀಕ್ಷಿಸಲು ಬಂದ ಈ ಅಜ್ಜಿ  ಭಾರತ ತಂಡದ ಹಿರಿಯ ಅಭಿಮಾನಿಯಾಗಿದ್ದು,  ಭಾರತ ತಂಡಕ್ಕೆ ಪೀಪಿ ಊದುತ್ತಾ,  ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿದು ಅತಿ ಉತ್ಸಾಹದಿಂದ  ಪ್ರೋತ್ಸಾಹಿಸುತ್ತಿದ್ದು,  ಎಲ್ಲರ ಗಮನ ಅವರ ಮೇಲೆ ಬಿತ್ತು.  ಕ್ಯಾಮರಾ ಕಣ್ಣುಗಳಲ್ಲಿ ಸ್ಟಾರ್ ಪಟ್ಟ ಕಟ್ಟಿಕೊಂಡರು ಈ  ” ಚಾರುಲತಾ ಪಟೇಲ್ “. 

ವಿಶ್ವಕಪ್  ಕ್ರಿಕೆಟ್ ನ ಅಧಿಕೃತ ಟ್ವಿಟ್ಟರ್ ಪೇಜಿನಲ್ಲಿ  ಚಾರುಲತಾ ಪಟೇಲ್ ಅವರ ಫೋಟೋ ರಾರಾಜಿಸುತ್ತಿತ್ತು.  ಭಾರತ ತಂಡಕ್ಕೆ ಈ ಹಿರಿಯ  ಅಭಿಮಾನಿಯ ಪ್ರೋತ್ಸಾಹ ಕಂಡು  ಕ್ರಿಕೆಟ್ ಅಭಿಮಾನಿಗಳು   ಇವರ ಜೊತೆ ಸೆಲ್ಫಿ ತೆಗೆಯಲು ಮುಗಿಬಿದ್ದರು.