Thu. Dec 9th, 2021

ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ

ಇಂಡಿಯನ್ ಕ್ರಿಕೆಟ್ ಟೀಮಿನ ಆಲ್-ರೌಂಡರ್ ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 37 ಹರೆಯದ ಯುವರಜ್ ಸಿಂಗ್ ಇಂಡಿಯನ್ ಕ್ರಿಕೆಟ್ ಟೀಮಿನ ಅಭಿಮಾನವಾಗಿದರು.19  ವರ್ಷಕಾಲ ಇಂಡಿಯನ್ ಕ್ರಿಕೆಟ್ ಟೀಮಿಗೆ ಬೇಕಾಗಿ ಆಟವಾಡಿ, 2012ರಲ್ಲಿ ಕ್ಯಾನ್ಸರಿಗೆ ತುತ್ತಾಗಿ ಕ್ಯಾನ್ಸರನ್ನು ಕೂಡ ಸೋಲಿಸಿ ಇಂಡಿಯನ್  ಟೀಮಿನಲ್ಲಿ ಪುನಃ ಆಟ ಮುಂದುವರಿಸಿದರು.

ಮುಂಬೈಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವರಾಜ್ ಸಿಂಗ್ ಅವರೇ ತನ್ನ ಅಂತರಾಷ್ಟ್ರೀಯ ಆಟಕ್ಕೆ ನಿವೃತ್ತಿ ಘೋಷಿಸಿದರು. ಸಚಿನ್ ಜೊತೆ ಆಟವಾಡಿದ್ದು ತನ್ನ ಭಾಗ್ಯ ಎಂದು,  2000ದಲ್ಲಿ ಪ್ರಥಮವಾಗಿ ಆಟವಾಡಲು ಅವಕಾಶ ನೀಡಿದ ಸೌರವ್  ಗಂಗೂಲಿಗೂ,  ಎಂ.ಎಸ್ ಧೋನಿ ಗೂ ಪ್ರತ್ಯೇಕ ಧನ್ಯವಾದವನ್ನು  ಹೇಳಿದರು.