Thu. Dec 9th, 2021

ಅತಿ ದೊಡ್ಡ ಹನುಮಾನ್ ಪ್ರತಿಮೆ

ಇದು ಕಾಸರಗೋಡು ಜಿಲ್ಲೆಯ ಬೋವಿಕಾನದ ಹತ್ತಿರವಿರುವ ಶಾಮ್ ಬಾಬು ನಗರದಲ್ಲಿ  ನೆಲೆನಿಂತಿರುವ ಶ್ರೀ ಹನುಮಾನ್ ಸ್ವಾಮಿ ಕ್ಷೇತ್ರವಾಗಿದೆ.

ಈ ದೇವಾಲಯದ ಮುಂಭಾಗದಲ್ಲಿ ಅತಿ ಎತ್ತರದ ಸುಂದರವಾದ ಒಂದು ಹನುಮಾನ್ ಪ್ರತಿಮೆಯನ್ನು ಕಾಣಬಹುದು. ಈ ಹನುಮಾನ್ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಕಾಣುವಂತಹ ಹನುಮಂತನ ಪ್ರತಿಮೆ ಉತ್ತರ ಮಲಬಾರ್ ನಲ್ಲೆ ಅತಿ ದೊಡ್ಡ ಪ್ರತಿಮೆಯಾಗಿದೆ.

ಹನುಮಾನ್ ಪ್ರತಿಮೆ 30 ಅಡಿ ಎತ್ತರವಿದ್ದು, ಈ ಪ್ರತಿಮೆಯನ್ನು ನಿರ್ಮಿಸಲು ನಾಲ್ಕು ತಿಂಗಳ ಕಾಲ ಸಮಯ ಮತ್ತು ಅಂದಾಜು ಸುಮಾರು 8.5 ಲಕ್ಷ ರೂಪಾಯಿ ವೆಚ್ಚ ತಗಲಿದೆ ಎಂದು ತಿಳಿದುಬಂದಿದೆ. ಈ ಹನುಮಾನ್ ಪ್ರತಿಮೆಯನ್ನು ನೋಡಲು ಬಹಳ ಸುಂದರವಾಗಿದ್ದು ಅತಿ ಆಕರ್ಷಕವಾಗಿದೆ.  ಪ್ರತಿನಿತ್ಯ ಅದೆಷ್ಟೋ ಭಕ್ತಾದಿಗಳು ಈ ಹನುಮಾನ್ ಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ಹನುಮಾನ್ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.

ಕಾಸರಗೋಡಿನಲ್ಲಿ  ಕಾಣಲ್ಪಡುವ  ಎಲ್ಲಾ  ಕೋಟೆಗಳಲ್ಲು ಒಂದೊಂದು ಹನುಮಂತನ ಕ್ಷೇತ್ರವನ್ನು ನಾವು ನೋಡಬಹುದು. ಈ ಹನುಮಂತ ಸ್ವಾಮಿಯ ಕ್ಷೇತ್ರವು ಕೂಡ ಬೋವಿಕಾನದ ಪೋವ್ವಲ್  ಕೋಟೆಯ ಸಮೀಪದಲ್ಲಿ ನೆಲೆನಿಂತಿದೆ.

ಎಡದ ಕೈಯಲ್ಲಿ ಗಧೆ, ಬಲದ ಕೈಯಲ್ಲಿ ಭಕ್ತಾದಿಗಳಿಗೆ ಅನುಗ್ರಹ ನೀಡುವಂತಹ ಈ ಬೃಹತ್ ಹನುಮಾನ್ ಪ್ರತಿಮೆ ಕಾಸರಗೋಡಿನ ಬೋವಿಕಾನದದಿಂದ ಮಲ್ಲ ದೇವಾಲಯಕ್ಕೆ ಹೋಗುವಾಗ ಸಿಗುವಂತಹ ಶ್ಯಾಮ್ ಬಾಬು ನಗರಿನ  ಮಾರ್ಗದ ಪಕ್ಕದಲ್ಲಿ ಕಾಣಬರುತ್ತದೆ.

CLICK HERE TO PLAY VIDEO