Thu. Dec 9th, 2021

ಹಬ್ಬದ ಸಮಯದಲ್ಲಿ ಸಿನೆಮಾ ರಸಿಕರನ್ನು ರಂಜಿಸಲು ಭೀಮಸೇನ ನಳಮಹಾರಾಜ ಬರುತ್ತಿದ್ದಾನೆ…

ಕಾರ್ತಿಕ  ಸರಗೂರ್ ಕಥೆ, ನಿರ್ದೇಶನದ ಭೀಮಸೇನ ನಳಮಹಾರಾಜ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಸೇರಿ ನಿರ್ಮಿಸಿದ್ದಾರೆ.ಇದೇ ಅಕ್ಟೋಬರ್ 29ರಂದು ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಕಿರಿಕ್ ಪಾರ್ಟಿ ಚಿತ್ರದಲ್ಲಿ ಲೋಕೇಶ್ ಕುಮಾರ್ ಆಗಿ ನಟಿಸಿದ್ದ ಅರವಿಂದ್ ಅಯ್ಯರ್ ಭೀಮಸೇನ ನಳಮಹಾರಾಜ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.ಅರವಿಂದ್ ಚಿತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿ ಗಡ್ಡ ಬಿಟ್ಟು ತನ್ನನ್ನು ತುಂಬಾ ಬದಲಾವಣೆ ಮಾಡಿಕೊಂಡಿದ್ದಾರೆ.ನವರಸಗಳು ಸೇರಿದರೆ ಅಡುಗೆ ಹೇಗೆ  ರುಚಿಯಾಗಿ ಸಿದ್ದವಾಗುತ್ತಿದೆಯೋ ಅದೇ ರೀತಿ ಎಲ್ಲಾ ರಸಗಳು ಸರಿಯಾದ ರೀತಿಯಲ್ಲಿ ಮಿಶ್ರಣ ಗೊಂಡು ಭೀಮಸೇನ ನಳಮಹಾರಾಜ ಚಿತ್ರ ಮೂಡಿಬಂದಿದೆ ಎಂದು ಅರವಿಂದ್ ತಿಳಿಸಿದ್ದಾರೆ.

ಪೌರಾಣಿಕ ಹಾಗೂ ಆಧುನಿಕ ಕಥೆಯ ಸಮ್ಮಿಶ್ರಣ ಚಿತ್ರದಲ್ಲಿದ್ದು, ಸಿನಿಮಾ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗುವ ಈ ಚಿತ್ರ ಹಬ್ಬದ ಸಮಯದಲ್ಲಿ ಸಿನಿಮಾ ಪ್ರೇಮಿಗಳನ್ನು ರಂಜಿಸುದಂತು ಗ್ಯಾರೆಂಟಿ.ಕರ್ನಾಟಕ ಜನರ ಸಂಸ್ಕೃತಿಗೆ ಒತ್ತು ನೀಡಿ,  ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.ಆರೋಹಿ ನಾರಾಯಣ್ ಚಿತ್ರದ ನಾಯಕಿಯಾಗಿ ಹಾಗೂ ಪ್ರಿಯಂಕ ತಿಮ್ಮೇಶ್, ಅಚ್ಚುತ್ ಕುಮಾರ್,  ವಿಜಯ್ ಚೆಂಡೂರ್  ಅಭಿನಯಿಸಿದ್ದಾರೆ.ಚರಣ್ ರಾಜ್ ಚಿತ್ರಕ್ಕೆ ಇಂಪಾದ ಸಂಗೀತ ನೀಡಿದ್ದು, ರವೀಂದ್ರನಾಥ್ ಛಾಯಾಗ್ರಹಣ ಮಾಡಿದ್ದಾರೆ.