Thu. Dec 9th, 2021

97ನೇ ಜನ್ಮದಿನ ಆಚರಣೆಯಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ವಿ ಎಸ್ ಅಚ್ಯುತಾನಂದನ್.

ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ನಿನ್ನೆ ತನ್ನ 97ನೇ ಜನ್ಮ ದಿನವನ್ನು ಆಚರಿಸಿದರು.

ಕೋವಿಡ್ ನಿರ್ಬಂಧಗಳಿಂದ ತನ್ನ ಅಧಿಕೃತ ನಿವಾಸದ ಮನೆಯಲ್ಲಿ ಕುಟುಂಬದವರೊಂದಿಗೆ ಸರಳವಾಗಿ ಜನ್ಮ ದಿನವನ್ನು ಆಚರಿಸಿದರು.

1932  ಅಕ್ಟೋಬರ್ 20ರಂದು ಆಲಪ್ಪುಳದಲ್ಲಿ
ವೆಲಿಕಾಕೆತ್ ಶಂಕರನ್ ಅಚ್ಚುತಾನಂದನ್ ಜನಿಸಿದರು.

2006 ರಿಂದ 2011ರ ವರೆಗೆ ಕೇರಳ  ಮುಖ್ಯಮಂತ್ರಿಯಾಗಿದ್ದು, ಇವರು ಭಾರತದ
ಅತ್ಯಂತ ಹಿರಿಯ ರಾಜಕೀಯ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದಾರೆ.

ವಿ. ಎಸ್ ಅಚ್ಯುತಾನಂದನ್ ಅವರು ಇದೀಗ ಕೋವಿಡ್ ನಿಯಂತ್ರಣಗಳು ಮತ್ತು ವೃದ್ಧಾಪ್ಯದಿಂದಾಗಿ ಪೂರ್ಣ ಸಮಯ ತಮ್ಮ ನಿವಾಸದಲ್ಲೇ ಇದ್ದು, ವೃದ್ಧಾಪ್ಯ ಸಹಜ ತೊಂದರೆಗಳಿಂದಾಗಿ ಒಂದು ವರ್ಷದಿಂದೀಚೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ  ಹಾಜರಾಗಲಿಲ್ಲ.