Thu. Dec 9th, 2021

ಬಹು ನಿರೀಕ್ಷೆಯಲ್ಲಿ ನಿರ್ಮಿಸಲಾದ ಮಲಯಾಳಂನ ಖ್ಯಾತ ನಟ ಮುಖೇಶ್ ಅವರ ಒಂದು ಚಿತ್ರ , ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳದಿರುವ ಕಾರಣ ಏನು ಗೊತ್ತೆ?

ಮಲಯಾಳಂನ ಖ್ಯಾತ ನಟ ಮುಖೇಶ್ ನಟಿಸಿದ ಚಿತ್ರಗಳು ಒಂದು ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಭಾರಿ ಯಶಸ್ಸು ಗಳಿಸುತ್ತಿತ್ತು. 90ರ ದಶಕದಲ್ಲಿ ನಾಯಕ ಸಹ ನಟರಾಗಿ ಮಿಂಚುತ್ತಿದ್ದ ಮುಖೇಶ್ ಮಲಯಾಳಂ ಚಿತ್ರರಂಗದ ಪ್ರಮುಖ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿ, ಕುಟುಂಬ ಪ್ರೇಕ್ಷಕರ ಮೆಚ್ಚುಗೆಯ ನಟರಲ್ಲಿ ಒಬ್ಬರಾಗಿದ್ದರು.

ಮುಖೇಶ್ ಅವರು ನಟಿಸಿದ ಗಾಡ್ ಫಾದರ್, ರಾಮಜೀ ರಾವ್ ಸ್ಪೀಕಿಂಗ್ ಚಿತ್ರಗಳು, ಚಿತ್ರಮಂದಿರಗಳಲ್ಲಿ ಭಾರಿ ಯಶಸ್ಸನ್ನು ಗಳಿಸಿತ್ತು. ಮುಖೇಶ್ ಅವರಿಗೆ ಇದರಿಂದ ಸಾಕಷ್ಟು ಯಶಸ್ಸಿನ ಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ದೊರೆತರೂ, ಇವರು ಅಭಿನಯಿಸಿದ ಬಹುನಿರೀಕ್ಷೆಯ ಒಂದು ಚಿತ್ರ ಇಂದಿನವರೆಗೂ ಬಿಡುಗಡೆಯಾಗದೆ ಉಳಿದುಕೊಂಡಿದೆ. ಅದುವೇ ಸಾಗ ಫಿಲ್ಮ್ ಸಿನ ‘ ಪ್ರವಾಚಕನ್ ‘ ಎಂಬ ಚಿತ್ರ.

ಹಾಸ್ಯ ಮತ್ತು ಪ್ರಣಯಕ್ಕೆ ಒತ್ತು ನೀಡಿ 1993 ರಲ್ಲಿ ಪಿ .ಜಿ ವಿಷ್ವಂಭರನ್ ‘ ಪ್ರವಾಚಕನ್ ‘ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮುಖೇಶ್ ಅವರ ಅಭಿನಯದ ಬಹುನಿರೀಕ್ಷೆಯ ಚಿತ್ರವಾಗಿದ್ದ ‘ ಪ್ರವಾಚಕನ್ ‘ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ಉಳಿದುಕೊಂಡಿತು.

ಇದಕ್ಕೆ ಕಾರಣ ಬಿಡುಗಡೆಗೆ ಸಜ್ಜಾಗಿದ್ದ ಈ ಚಿತ್ರದ ಅನಧಿಕೃತ ವಿಡಿಯೋ ಕ್ಯಾಸೆಟ್ ಗಳು ಅನಿರೀಕ್ಷಿತವಾಗಿ ಮಾರುಕಟ್ಟೆಗೆ ಹೇಗೋ ಸೋರಿಕೆ ಯಾಗಿದ್ದು, ಇದು ಸಾಗ ಫಿಲಂ ಸಿಗೆ ದೊಡ್ಡ ಆಘಾತವನ್ನುಂಟುಮಾಡಿತು. ಇದರಿಂದ ಚಿತ್ರದ ವಿತರಕರಾದ ಸಾಗ ಫಿಲಂಸ್ ಇನ್ನು ‘ ಪ್ರವಾಚಕನ್ ‘ ಚಿತ್ರ, ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಂತು.

ಒಂದೋ ಸೆನ್ಸರ್ ಮಾಡಿದಾಗ ಅಥವಾ ಎಡಿಟ್ ಲ್ಯಾಬ್ ಗಳಿಂದ ಈ ಚಿತ್ರದ ವಿಡಿಯೋ ಕ್ಯಾಸೆಟ್ ಸೋರಿಕೆ ಆಗಿರಬಹುದು ಎಂಬ ಅಭಿಪ್ರಾಯಗಳಿದ್ದರೂ, ಇಂದಿನವರೆಗೂ ಚಿತ್ರದ ವಿಡಿಯೋ ಕ್ಯಾಸೆಟ್ ಹೇಗೆ ಮಾರುಕಟ್ಟೆಗೆ ಸೋರಿಕೆ ಆಯಿತು ಎಂದು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇದರಿಂದ ಮುಖೇಶ್ ಅವರ ಸಿನಿಮಾ ಜೀವನದ ಬಹುನಿರೀಕ್ಷೆಯ ಚಿತ್ರವಾಗಿದ್ದ , ‘ ಪ್ರವಾಚಕನ್ ‘ ಚಿತ್ರ ಮಂದಿರಗಳನ್ನು ಕಾಣದೆ ಪೆಟ್ಟಿಗೆಯಲ್ಲೇ ಉಳಿದುಕೊಂಡಿತು.