Thu. Dec 9th, 2021

ಭಾರತೀಯ ಬಳಕೆದಾರರಿಗಾಗಿ ವಿಶೇಷ ವೈಶಿಷ್ಟ್ಯವನ್ನು ಸಿದ್ಧಪಡಿಸದ ಫೇಸ್ಬುಕ್

ನಿಮ್ಮ ಪ್ರೊಫೈಲ್ ಲಾಕ್ ಆಗಿದೆ ಎಂಬುದನ್ನು ಸೂಚಿಸಲು ಫೇಸ್ ಬುಕ್ ನಿಮ್ಮ ಪ್ರೊಫೈಲ್ ಪುಟಕ್ಕೆ ಸೂಚಕವನ್ನು ಸಹ ಸೇರಿಸಲಿದೆ

ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರು ತಮ್ಮ ಪ್ರೊಫೈಲ್‌ಗಳನ್ನು ಸಂಪೂರ್ಣವಾಗಿ ಲಾಕ್ ಮಾಡಬಹುದಾದ ಹೊಸ  ವೈಶಿಷ್ಟ್ಯವನ್ನು ಫೇಸ್ ಬುಕ್ ಸಿದ್ದಪಡಿಸಿದೆ. ಇದರಿಂದ ಅವರ ಸ್ನೇಹಿತರು ಮಾತ್ರ ಅವರ ಫೋಟೋಗಳು ಮತ್ತು ಪೋಸ್ಟ್‌ಗಳನ್ನು ನೋಡಬಹುದು.

ಪ್ರಸ್ತುತ ಫೇಸ್ ಬುಕ್ ನಲ್ಲಿ ಪ್ರೊಫೈಲ್ ಪಿಕ್ಚರ್ ಗಾರ್ಡ್ ನೀಡಲಾಗಿದ್ದು,  ಈಗ ಒದಗಿಸಿರುವ ನೂತನ ವೈಶಿಷ್ಟ್ಯದಿಂದ ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂಬುದರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಲಿದ್ದಾರೆ.

ಫೇಸ್ ಬುಕ್ ಪ್ರೊಫೈಲ್ ನಲ್ಲಿರುವ ಹಲವು ಪ್ರೈವೆಸಿ ಸೆಟ್ಟಿಂಗ್ ಹಾಗೂ ಹಲವು ಹೊಸ ವೈಶಿಷ್ಟ್ಯಗಳನ್ನು ಒಂದೇ ಒಂದು ಸಿಂಪಲ್ ಸ್ಟೆಪ್ ಮೂಲಕ ಅಪ್ಲೈ ಮಾಡಬಹುದು ಈ ಕುರಿತು ಗುರುವಾರ ಫೇಸ್ಬುಕ್ ಹೇಳಿಕೆ ಪ್ರಕಟಿಸಿದೆ.

ಫೇಸ್ ಬುಕ್ ನ ಈ ಹೊಸ ವೈಶಿಷ್ಟ್ಯಗಳು

  • ಯಾವುದೇ ಅಪರಿಚಿತ ವ್ಯಕ್ತಿ ನಿಮ್ಮ ಫುಲ್ ಸೈಜ್ ಪ್ರೊಫೈಲ್ ಭಾವಚಿತ್ರ ಹಾಗೂ ಕವರ್ ಫೋಟೋಗಳನ್ನೂ ಜೂಮ್ ಮಾಡುವುದು ಸಾಧ್ಯವಾಗುದಿಲ್ಲ
 
  • ಅಪರಿಚಿತ ವ್ಯಕ್ತಿ ಯ ಫೋಟೋಗಳನ್ನು ಶೇರ್ ಹಾಗೂ ಡೌನ್ ಲೋಡ್ ಕೂಡ ಮಾಡಲಾಗುವುದಿಲ್ಲ.
 
  • ಟೈಮ್ ಲೈನ್ ನಲ್ಲಿರುವ ಪೋಸ್ಟ್ ಹಾಗೂ ಫೋಟೋಗಳನ್ನೂ ಕೂಡ ನೋಡಲು ಸಾಧ್ಯವಿಲ್ಲ.

  • ನಿಮ್ಮ ಪ್ರೊಫೈಲ್ ಲಾಕ್ ಆಗಿದೆ ಎಂಬುದನ್ನು ಸೂಚಿಸಲು ಫೇಸ್ ಬುಕ್ ನಿಮ್ಮ ಪ್ರೊಫೈಲ್ ಪುಟಕ್ಕೆ ಸೂಚಕವನ್ನು ಸಹ ಸೇರಿಸಲಿದೆ.
Play Video