Thu. Dec 9th, 2021

ಕೇರಳದಲ್ಲಿ ಇಂದು 26 ಜನರಿಗೆ ಕೋವಿಡ್ 19 ದೃಢ : ಮೂವರಿಗೆ ರೋಗಮುಕ್ತಿ

ರೋಗ ನಿರ್ಣಯ ಮಾಡಿದವರಲ್ಲಿ 14 ಜನರು ಹೊರ ರಾಜ್ಯಗಳಿಂದ ಬಂದವರು ಮತ್ತು ಏಳು ಮಂದಿ ವಿದೇಶದಿಂದ ಬಂದವರಾಗಿದ್ದಾರೆ

ಕಾಸರಗೋಡು : ಕೇರಳದಲ್ಲಿ ಇಂದು 26 ಜನರಿಗೆ ಕೋವಿಡ್ 19 ದೃಢ ಪಟ್ಟಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ಧಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ. 
 
ಕಾಸರಗೋಡು ಜಿಲ್ಲೆಯಲ್ಲಿ ಹತ್ತು, ಮಲಪ್ಪುರಂ ಜಿಲ್ಲೆಯಲ್ಲಿ ಐದು, ಪಾಲಕ್ಕಾಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ತಲಾ ಮೂರು, ಕಣ್ಣೂರು ಜಿಲ್ಲೆಯಲ್ಲಿ ಇಬ್ಬರು ಮತ್ತು ಪಟ್ಟಣಂತಿಟ್ಟ, ಇಡುಕ್ಕಿ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ತಲಾ ಒಬ್ಬರು ರೋಗ ದೃಡಪಟ್ಟವರಾಗಿದ್ದಾರೆ. 
 
ಇಂದು ರೋಗ ನಿರ್ಣಯ ಮಾಡಿದವರಲ್ಲಿ 14 ಜನರು ಹೊರ ರಾಜ್ಯಗಳಿಂದ ಬಂದವರು ಮತ್ತು ಏಳು ಮಂದಿ ವಿದೇಶದಿಂದ ಬಂದವರಾಗಿದ್ದಾರೆ

Play Video