Wed. Dec 8th, 2021

20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ: ಪ್ರಧಾನಿ ನರೇಂದ್ರ ಮೋದಿ

ವಿಶೇಷವಾಗಿ ರೈತರು, ಕಾರ್ಮಿಕರನ್ನು ಕೇಂದ್ರಿಕರಿಸಿಕೊಂಡು ಈ ಪ್ಯಾಕೇಜ್ ನ್ನು ಘೋಷಿಸಲಾಗಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ನ್ನು ಘೋಷಣೆ ಮಾಡಿದ್ದಾರೆ. 

‘ಈ ಪ್ಯಾಕೇಜ್ ಮೌಲ್ಯ 20 ಲಕ್ಷ ಕೋಟಿ ರೂ. ಅಥವಾ ಭಾರತದ ಶೇಕಡಾ 10 ರಷ್ಟು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ ಭಾಗವಾಗಿದೆ. 2020 ರಲ್ಲಿ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಭಾರತದ ಸ್ವಾವಲಂಬಿಗಳ ಪ್ರಯಾಣವನ್ನು ವೇಗಗೊಳಿಸುತ್ತದೆ’ ಎಂದು ಪ್ರಧಾನಿ ಮೋದಿ ರಾಷ್ಟ್ರವನ್ನುದ್ದೇಶಿಸಿ ಹೇಳಿದರು

‘ಈ ಪ್ಯಾಕೇಜ್ ಭೂಮಿ, ಕಾರ್ಮಿಕ, ದ್ರವ್ಯತೆ ಮತ್ತು ಕಾನೂನಿನ ಮೇಲೆ ಕೇಂದ್ರೀಕರಿಸುತ್ತದೆ, ಇದು ಸಣ್ಣ ಕೈಗಾರಿಕೆಗಳು ಮತ್ತು ಎಂಎಸ್‌ಎಂಇಗಳಿಗೆ ಸಹಾಯ ಮಾಡುತ್ತದೆ, ವಿಶೇಷವಾಗಿ ರೈತರು, ಕಾರ್ಮಿಕರನ್ನು ಕೇಂದ್ರಿಕರಿಸಿಕೊಂಡು ಈ ಪ್ಯಾಕೇಜ್ ನ್ನು ಘೋಷಿಸಲಾಗಿದೆ. ಇದು ಸಮಾಜದ ವಿವಿಧ ಕ್ಷೇತ್ರಗಳಿಗೆ ಅಧಿಕಾರ ನೀಡುತ್ತದೆ. ಹಣಕಾಸು ಸಚಿವಾಲಯವು ಪ್ಯಾಕೇಜ್ ಬಗ್ಗೆ ವಿವರಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ  ಮೋದಿ ಹೇಳಿದರು

Play Video