Thu. Dec 9th, 2021

ಲಾಕ್ ಡೌನ್ ಸಮಯದಲ್ಲಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಯ ಆನ್ ಲೈನ್ ಅಪ್ಲಿಕೇಶನ್: ದೊಡ್ಡ ಮೊತ್ತದ ಬಹುಮಾನಗಳು

ಸ್ಪರ್ಧೆಯು ಆನ್ಲೈನ್ ಮೂಲಕ ನಡೆಯಲಿದ್ದು, ವಿಜೇತರಿಗೆ ವಿದ್ಯಾರ್ಥಿ ವೇತನ ಸೇರಿದಂತೆ ದೊಡ್ಡ ಮೊತ್ತದ ಬಹುಮಾನಗಳು

ಲಾಕ್‌ಡೌನ್ ಸಮಯದಲ್ಲಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ  ಸ್ಪರ್ಧೆಯ ಎಜುಕೇಶನಲ್ ಅಪ್ಲಿಕೇಶನ್ wishill technologies ಆನ್ ಲೈನ್ ನಲ್ಲಿ ಆಯೋಜಿಸಿದೆ.
 
ಲಾಕ್‌ಡೌನ್ ನಿಂದ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತಿದ್ದಾರೆ. ವರ್ಷಾಂತ್ಯದ ಯಾವುದೇ ಪರೀಕ್ಷೆಗಳು ನಡೆದಿಲ್ಲ. ಈ ಸಂದರ್ಭದಲ್ಲಿ, ಮಾನಸಿಕವಾಗಿ ದಣಿದ ಮಕ್ಕಳಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
 

ಸ್ಪರ್ಧೆಗೆ ಪ್ರವೇಶಿಸಲು, ನೀವು wishill ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಅಥವಾ wishill ಮೊಬೈಲ್ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ನೀವು 60 ಸೆಕೆಂಡುಗಳಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ವಿಜೇತರನ್ನು ಐದು ಸದಸ್ಯರ ತಜ್ಞರ ಸಮಿತಿ ಆಯ್ಕೆ ಮಾಡುತ್ತದೆ. 

ಪ್ರಥಮ ಬಹುಮಾನ ಪಡೆದವರಿಗೆ 25 ಸಾವಿರ ರೂ. ಹಾಗೂ ವಿದ್ಯಾರ್ಥಿ ಓದುತ್ತಿರುವ ಶಾಲೆಗೂ ಪ್ರಶಸ್ತಿ ನೀಡಲಾಗುವುದು ಎಂದು ಸಂಘಟಕರು ಘೋಷಿಸಿದ್ದಾರೆ.