Thu. Dec 9th, 2021

ಲಾಕ್ ಡೌನ್ ಮಧ್ಯೆ ವೈರಲ್ ಆಗ್ತಾ ಇದೆ ಹೌಸ್ ಪಾರ್ಟಿ

ಲಾಕ್ ಡೌನ್ ನಡೆಯುತ್ತಿರುವ ಈ ಸಮಯದಲ್ಲಿ ಜನರು ಮನೆಯಲ್ಲಿ ಕಾಲ ಕಳೆಯಲು ಏನಾದರೊಂದು ಪ್ರಯೋಗದಲ್ಲಿ ನಿರತರಾಗಿದ್ದಾರೆ.
ಈ ಸಮಯದಲ್ಲಿ ಅಂಡ್ರಾಯ್ಡ್ ಮತ್ತು ಮ್ಯಾಕ್ ಓಎಸ್ ಗಳಲ್ಲಿ 1 ಅಪ್ಲಿಕೇಶನ್ ಬಿಡುಗಡೆಯಾಗಿ ಭಾರಿ ವೈರಲ್ ಆಗ್ತಾ ಇದೆ. ಆ ಅಪ್ಲಿಕೇಶನೇ ಹೌಸ್ ಪಾರ್ಟಿ.

ಹೌಸ್ ಪಾರ್ಟಿ ಹೇಗೆ ಕೆಲಸ ಮಾಡುತ್ತೆ ?

ಹೌಸ್ ಪಾರ್ಟಿ ಎಂಬುವುದು ಖಾಸಗಿ ವಿಡಿಯೋ ಚಾಟ್ ಅಪ್ಲಿಕೇಶನ್ ಆಗಿದ್ದು, ಇದರಲ್ಲಿ ಗ್ರೂಪ್ ವಿಡಿಯೋ ಚಾಟ್ ಬಹಳ ಜನಪ್ರಿಯವಾಗಿದೆ. ಇದರಲ್ಲಿ ಒಂದೇ ಸಮಯಕ್ಕೆ ಎಂಟು ಜನರಿಗೆ ರಸಪ್ರಶ್ನೆಯಂತ ಆಟಗಳನ್ನು ಆಡಬಹುದಲ್ಲದೆ, ಬಳಕೆದಾರರಿಗೆ ಮನೋರಂಜನೆ ಮಾಹಿತಿಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಕೂಡ ಮಾಡಿದೆ.

ಈ  ಅಪ್ಲಿಕೇಶನ್ ಯುವ ಜನಾಂಗಕ್ಕೆ ಹೆಚ್ಚು ಇಷ್ಟವಾಗಿದ್ದು ವೇಗವಾಗಿ ವೈರಲ್ ಕೂಡ ಆಗ್ತಾ ಇದೆ.