Thu. Dec 9th, 2021

ವಾಟ್ಸ್ ಆ್ಯಪ್ ಸ್ಟೇಟಸ್ 15 ಸೆಕೆಂಡ್ ಗೆ ಕಡಿತ

30 March 2020

ಕೋವಿಡ್ 19 ಅನ್ನು ನಿಗ್ರಹಿಸಲು ಕೇಂದ್ರ ಸರಕಾರವು ಲಾಕ್ ಡೌನ್ ಘೋಷಿಸಿದರೊಂದಿಗೆ, ಜನರ ಇಂಟರ್ ನೆಟ್ ಬಳಕೆ ಭಾರಿ ಏರಿಕೆ ಕಂಡಿದೆ.

ವಿಡಿಯೋ ವೀಕ್ಷಣೆ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆ ಬಹಳ ಹೆಚ್ಚಾಗಿದೆ. ಮೆಸೇಜ್ ಹಾಗು ವಿಡಿಯೋ ಕರೆಗಳಿಗಾಗಿ ವಾಟ್ಸ್ ಆ್ಯಪ್ ಅನ್ನು ಜನರು ಹೆಚ್ಚಾಗಿ ಬಳಸುತ್ತಿದ್ದು, ವಾಟ್ಸ್ ಆ್ಯಪ್ ಅಪ್ಲಿಕೇಶನ್ ಗೆ ಕೆಲವೊಂದು ನಿಬಂಧನೆಗಳನ್ನು ಮಾಡಲಾಗಿದೆ. 

ವಾಟ್ಸ್ ಆ್ಯಪ್ ಡೇಟಾ ಟ್ರಾಫಿಕನ್ನು ಕಡಿಮೆ ಮಾಡುವ ಸಲುವಾಗಿ ಭಾರತದಲ್ಲಿ ಇಲ್ಲಿವರೆಗೆ 30 ಸೆಕೆಂಡ್ ಸ್ಟೇಟಸ್ ವಿಡಿಯೋ ವನ್ನು 15 ಸೆಕೆಂಡಿಗೆ ಇಳಿಸಲಾಗಿದೆ. ಆದರಿಂದ ಇನ್ನು ಲಾಕ್ ಡೌನ್ ಇರುವವರೆಗೆ ವಾಟ್ಸ್ ಆ್ಯಪ್ ಉಪಯೋಗಿಸುವವರು 15 ನಿಮಿಷಕ್ಕಿಂತ ಹೆಚ್ಚು ಅವಧಿ ಇರುವ ವಿಡಿಯೋ ಗಳನ್ನು ತಮ್ಮ ಸ್ಟೇಟಸ್ ನಲ್ಲಿ ಹಾಕುವುದು ಅಸಾಧ್ಯವಾಗಿದೆ.