Thu. Dec 9th, 2021

ಲಾಕ್ ಡೌನ್ ಪ್ರಭಾವ: ವಾಟ್ಸಾ ಆಪ್ ಬಳಕೆಯಲ್ಲಿ 40% ಹೆಚ್ಚಳ

ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವುದಕ್ಕೋಸ್ಕರ ದೇಶದಾದ್ಯಂತ ಲಾಕ್ ಡೌನ್  ಘೋಷಿಸಿರುವುದರಿಂದ ಎಲ್ಲರು ಮನೆಯೊಳಗೆ ಇದ್ದು, ಕಂಪನಿಗಳ ಆದೇಶದ ಮೇರೆಗೆ ವರ್ಕ್ ಫ್ರಮ್ ಹೋಂ ನಡೆಯುತ್ತಿದೆ.

ಕೆಲವರಿಗಂತೂ ಜಗತ್ತಿನ ದೈನಂದಿನ, ಹಾಗು ಹೋಗುಗಳನ್ನು ತಿಲಿಯುವುದಕ್ಕೊಸ್ಕರ ಸ್ಮಾರ್ಟ್ ಫೋನ್ ಗಳಲ್ಲೇ ದಿನ ಕಳೆಯುತ್ತಿದ್ದು, ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಗಳ ಉಪಯೋಗವೂ ಅತಿಯಾಗಿದ್ದು, ಇಂಥ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ ವಾಟ್ಸ್ ಆ್ಯಪ್. 

ಲಾಕ್ ಡೌನ್ ಆದ ಅಂದಿನಿಂದ ವಾಟ್ಸ್ ಆ್ಯಪ್ ಬಳಕೆ 40% ಹೆಚ್ಚಿದೆ. ಆದರೆ ಇದರಲ್ಲಿ ಬರುವಂತಹ ಸಂದೇಶಗಳು ಎಲ್ಲವೂ ಸರಿ ಆಗಬೇಕೆಂದಿಲ್ಲ.

ವಿಡಿಯೋ ಕಾಲ್ ಗಳು, ವಾಯ್ಸ್ ಕಾಲಿಂಗ್ ಕೂಡ ಎಂದಿಗಿಂತಲೂ ಈ ಸಮಯದಲ್ಲಿ ದುಪ್ಪಟ್ಟಾಗಿದೆ.