Wed. Dec 8th, 2021

ಕೋವಿಡ್ 19 ತಡೆಯಲು ಬಿಸಿಸಿಐ 51 ಕೋಟಿ ರೂ. ದೇಣಿಗೆ

ಭಾರತದಲ್ಲಿ ಕೋವಿಡ್ 19 ರೋಗ ತಡೆಯಲು ಹಲವು ವ್ಯಕ್ತಿ ಗಳಿಂದ, ಮಂಡಳಿಗಳಿಂದ, ದೊಡ್ಡ ದೊಡ್ಡ ಕಂಪನಿಗಳಿಂದ ಪ್ರಧಾನ ಮಂತ್ರಿ ವಿಪತ್ತು ನಿರ್ವಹಣೆ ಮತ್ತು ಪರಿಹಾರ ನಿಧಿಗೆ ದೇಣಿಗೆ ನೀಡಲಾಗುತ್ತಿದ್ದು, ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ( ಬಿಸಿಸಿಐ ) ಶನಿವಾರ 51 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡುವುದಾಗಿ ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರದ ವಿಪತ್ತು ನಿರ್ವಹಣಾ ಸಾಮರ್ಥ್ಯವನ್ನು ಬಲ ಪಡಿಸಲು, ಕೋವಿಡ್ ರೋಗವನ್ನು ಎದುರಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಗೌರವ ಕಾರ್ಯದರ್ಶಿಗಳು ಹಾಗು ಪದಾಧಿಕಾರಿಗಳು ಕೋವಿಡ್ ರೋಗದ ವಿರುದ್ಧ ದೇಶದ ಹೋರಾಟವನ್ನು ಬಲಪಡಿಸಲು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ಪರಿಸ್ಥಿತಿ ನಿಧಿಗೆ 51 ಕೋಟಿ ರೂಪಾಯಿಗಳನ್ನು ಪ್ರಕಟಣೆಯಲ್ಲಿ ಘೋಷಿಸಿದ್ದಾರೆ.